ಮದುವೆ ಕಾರ್ಯಕ್ರಮದಲ್ಲಿ ಹಾವಿನೊಂದಿಗೆ 'ನಾಗಿನ್ ಡ್ಯಾನ್ಸ್': ವಿಡಿಯೋ ವೈರಲ್ - ಮದುವೆಯಲ್ಲಿ ನಾಗಿಣಿ ಡ್ಯಾನ್ಸ್
ಮಯೂರ್ಭಂಜ್(ಒಡಿಶಾ): ಮದುವೆ ಕಾರ್ಯಕ್ರಮವೊಂದರಲ್ಲಿ ನಾಗರ ಹಾವಿನೊಂದಿಗೆ ಕೆಲವರು ನಾಗಿನ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಾಗರಹಾವು ಸಮೇತವಾಗಿ ಐವರನ್ನು ವಶಕ್ಕೆ ಪಡೆದರು.