ಕೊಪ್ಪಳದಲ್ಲಿ ಕಳೆಗಟ್ಟಿದ ನಾಗರ ಪಂಚಮಿ ಹಬ್ಬದ ಸಂಭ್ರಮ..
ಕೊಪ್ಪಳ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಕೊಪ್ಪಳದಲ್ಲಿ ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರು ತಮ್ಮ ಜಮೀನಿನಲ್ಲಿರುವ ಕಪ್ಪು ಮಣ್ಣನ್ನು ತಂದು, ನಾಗರ ಹಾವಿನ ಮೂರ್ತಿಯನ್ನು ಮಾಡಿ ಮನೆಯಲ್ಲಿ ಪೂಜಿಸುತ್ತಾರೆ. ಬಳಿಕ ಕುಟುಂಬಸ್ಥರೆಲ್ಲಾ ಸೇರಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ, ಎಲ್ಲರೂ ಒಟ್ಟಾಗಿ ಸವಿಯುತ್ತಾರೆ. ಈ ಹಬ್ಬದ ಆಚರಣೆ ಕುರಿತು ಮಹಿಳೆಯರು ಮಹಿಳೆಯರು ವಿವರಿಸಿದ್ದಾರೆ.