ಜಂಬೂಸವಾರಿಗೆ ಇನ್ನೆರಡೇ ದಿನ ಬಾಕಿ, ಕುಶಾಲತೋಪು ತಾಲೀಮು ಮುಕ್ತಾಯ - Jamboosavari reharsal
ಮೈಸೂರು: ಜಂಬೂಸವಾರಿ ಮೆರವಣಿಗೆಗೆ ಎರಡು ದಿನಗಳು ಬಾಕಿ ಇರುವುದರಿಂದ, ಅಂದು ಗಜಪಡೆ ಹಾಗೂ ಅಶ್ವಪಡೆ ಬೆದರದಂತೆ ಎಚ್ಚರವಹಿಸಲು ಅಂತಿಮ ಕುಶಾಲತೋಪು ತಾಲೀಮು ನಡೆಸಲಾಯಿತು. ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಸಿಎಆರ್ 30 ಸಿಬ್ಬಂದಿ 21 ಬಾರಿ ಸಿಡಿಮದ್ದು ಸಿಡಿಸುವ ಮೂಲಕ ತಾಲೀಮು ನಡೆಸಿದರು. ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಿ ವಿಜಯೋತ್ಸವಕ್ಕೆ ನಾಂದಿ ಹಾಡುವುದು ಸಂಪ್ರದಾಯ. ಇದಕ್ಕಾಗಿ ಇಂದು ಅಂತಿಮ ಹಂತದ ತಾಲೀಮು ಕೈಗೊಳ್ಳಲಾಯಿತು.
Last Updated : Oct 23, 2020, 2:41 PM IST