ಬಿಸಿಲೋ ಬಿಸಿಲು..! ಮೃಗಾಲಯದ ಪ್ರಾಣಿಗಳಿಗೆ ನೀರಿನ ಸಿಂಚನ, ಕಲ್ಲಂಗಡಿ, ಐಸ್‌ಕ್ರೀಂ - ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ
ಮೈಸೂರು: ಬೇಸಿಗೆಯ ಸುಡುಬಿಸಿಲಿಗೆ ಜನರೆಲ್ಲ ತತ್ತರಿಸಿ ಹೋಗುತ್ತಿದ್ದರೆ, ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳು ಕೂಲ್ ಕೂಲ್ ಆಗಿವೆ. ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸ್ಪ್ರಿಂಕ್ಲಿಂಗ್ ಮೂಲಕ ಜಿರಾಫೆ, ಸಿಂಹ, ಕಾಡೆಮ್ಮೆ, ಚಿರತೆ, ಹುಲಿ.. ಹೀಗೆ ಹಲವು ಪ್ರಾಣಿಗಳಿಗೆ ನೀರು ಸಿಂಪಡಿಸಲಾಗುತ್ತಿದೆ. ಅಲ್ಲದೇ ಕರಡಿ, ಚಿಂಪಾಂಜಿ, ಒರಾಂಗುಟಾನ್ ಇತರ ಪ್ರಾಣಿಗಳಿಗೆ ಕಲ್ಲಂಗಡಿ, ಐಸ್ ಕ್ರೀಂ ನೀಡಲಾಗುತ್ತಿದೆ. ಕೋವಿಡ್ ತಗ್ಗಿರುವ ಕಾರಣ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮೃಗಾಲಯದ ಆದಾಯ ಕೂಡ ದ್ವಿಗುಣಗೊಳ್ಳುತ್ತಿದೆ.