ನೂತನ ದಾಖಲೆ ಬರೆದ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ - lakhs people visited dasara flower show
ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಹೊಸ ದಾಖಲೆ ಬರೆದಿದೆ. ದಸರಾ ಸಂದರ್ಭದಲ್ಲಿ 6.76 ಲಕ್ಷ ಮಂದಿ ಪ್ರವಾಸಿಗರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು ಹೊಸ ದಾಖಲೆಯಾಗಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 9ರವರೆಗೆ ಅಂದರೆ 11 ದಿನ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 6.76 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಬಾರಿ 6.76 ಲಕ್ಷ ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದು, 1.5 ಕೋಟಿ ದಾಖಲೆ ಹಣ ಸಂಗ್ರಹವಾಗಿದೆ. ಹಾಗೂ ಈ ದಿನಗಳಲ್ಲಿ ಮೃಗಾಲಯಕ್ಕೆ 1.65 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಮತ್ತು ಅರಮನೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ.