ವೈರಾಗ್ಯಮೂರ್ತಿಗೆ ಮಹಾಮಸ್ತಕಾಭಿಷೇಕ: ಕಣ್ತುಂಬಿಕೊಂಡ ಭಕ್ತ ಸಮೂಹ - Mahamastabhiskeka to Vairagyamurthy in Muddebihala
ಮುದ್ದೇಬಿಹಾಳ(ವಿಜಯಪುರ): ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತಗಿರಿಯಲ್ಲಿರುವ ಭಗವಾನ್ ಬಾಹುಬಲಿಯ 11 ಅಡಿ ಎತ್ತರದ ಖಡ್ಗಾಸನ ಮೂರ್ತಿಗೆ ಬುಧವಾರ ಪ್ರಥಮ ಮಹಾಮಸ್ತಕಾಭಿಷೇಕ ಅದ್ಧೂರಿಯಾಗಿ ಜರುಗಿತು. ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಇಂದು ಕೇವಲ ಜ್ಞಾನ ಮತ್ತು ಮೋಕ್ಷಕಲ್ಯಾಣ ಕಾರ್ಯಕ್ರಮ ಜರುಗಿತು. ಹೊಂಬುಜ ಜೈನಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಗಳು ಹಾಗೂ ಮಹಾಮುನಿ ವಿಮಲೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮದ ವಿಧಿವಿಧಾನ ಜರುಗಿದವು. 1008 ಕಳಸಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮದ್ಯಾಹ್ನ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಜರುಗಿತು. ಈ ವೇಳೆ ಎಳನೀರು, ಮಾವಿನ ಹಣ್ಣಿನ ರಸ, ತುಪ್ಪ, ಹಾಲು, ಗಂಧ, ಚಂದನ ಮೊದಲಾದ ದ್ರವ್ಯಗಳಿಂದ ಭಕ್ತರು ಅಭಿಷೇಕ ನಡೆಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಕಣ್ತುಂಬಿಕೊಂಡರು.