Video: ಮದುವೆ ಮನೆಯಲ್ಲಿ ಮಹಿಳೆಯರ ಜೊತೆ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ
ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮದುವೆ ಮನೆಯಲ್ಲಿ ಮಹಿಳೆಯರ ಜತೆ ಕುಳಿತು ತಾಳಿ ಸರ ಪೋಣಿಸುವ ಮೂಲಕ ನವಜೋಡಿಗಳಿಗೆ ವಿಭಿನ್ನವಾಗಿ ಶುಭ ಹಾರೈಸಿ ಗಮನ ಸೆಳೆದರು. ಶುಕ್ರವಾರ ತಾಲೂಕು ಅಡಳಿತದ ಜತೆ ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವಾಗ ತರಗನಹಳ್ಳಿಯಲ್ಲಿ ಇಂಥದ್ದೊಂದು ಸೇವಾ ಕಾರ್ಯ ಮಾಡಿದರು. ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತ್ ಅವರ ಸಹೋದರ ಬಸವರಾಜ್ ವಿವಾಹ ಕಾರ್ಯಕ್ರಮವನ್ನ ತರಗನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶಾಸಕರು ತಾಳಿ ಪೋಣಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.