ಕರ್ನಾಟಕ

karnataka

ETV Bharat / videos

ಕೊಲ್ಲಂನಲ್ಲಿ ಸಾಗಿದ ಕಾಂಗ್ರೆಸ್‌ 'ಭಾರತ್ ಜೋಡೋ ಯಾತ್ರೆ': ರಾಹುಲ್​ಗೆ ಬೆಂಬಲಿಗರ ಸಾಥ್

By

Published : Sep 16, 2022, 8:50 AM IST

ಕೊಲ್ಲಂ(ಕೇರಳ): ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 'ಭಾರತ್ ಜೋಡೋ' ಯಾತ್ರೆ 9ನೇ ದಿನಕ್ಕೆ ಕಾಲಿಟ್ಟಿದೆ. ಕೇರಳದ ಕೊಲ್ಲಂನಿಂದ ಇಂದಿನ ಯಾತ್ರೆ ಆರಂಭಗೊಂಡಿದೆ. ಸಂಸದ ರಾಹುಲ್ ಗಾಂಧಿ ಅವರಿಗೆ ಅನೇಕ ಸ್ಥಳೀಯ ಮುಖಂಡರು, ಬೆಂಬಲಿಗರು ಸಾಥ್​ ಕೊಟ್ಟಿದ್ದಾರೆ. ನಿನ್ನೆ ವಿಶ್ರಾಂತಿ ಪಡೆದುಕೊಂಡಿದ್ದ ಮುಖಂಡರು ಇಂದು ತಮ್ಮ ಯಾತ್ರೆ ಮರು ಆರಂಭಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈ ಪಕ್ಷ ಹಮ್ಮಿಕೊಂಡಿರುವ ಯಾತ್ರೆ ಇದಾಗಿದ್ದು ಒಟ್ಟು 3,500 ಕಿಲೋಮೀಟರ್ ದೂರ ಸಾಗಲಿದೆ. ತಮಿಳುನಾಡಿನಿಂದ ಶುರುವಾಗಿರುವ ಯಾತ್ರೆ ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಒಟ್ಟು 150 ದಿನಗಳ ಕಾಲ ನಡೆಯಲಿದ್ದು ಜಮ್ಮು-ಕಾಶ್ಮೀರದಲ್ಲಿ ಸಮಾಪ್ತಿಗೊಳ್ಳಲಿದೆ.

ABOUT THE AUTHOR

...view details