ಕರ್ನಾಟಕ

karnataka

ETV Bharat / videos

405 ಅಡಿ ಎತ್ತರದ ಧ್ವಜಸ್ತಂಭ ಏರಿದ ಮಂಕಿಮ್ಯಾನ್ ಜ್ಯೋತಿರಾಜ್​ - ಧ್ವಜಸ್ತಂಭ ಏರಿದ ಜ್ಯೋತಿರಾಜ್

By

Published : Aug 15, 2022, 5:03 PM IST

ವಿಜಯನಗರ: ಚಿತ್ರದುರ್ಗ ಮೂಲದ ಕೋತಿರಾಜ ಖ್ಯಾತಿಯ ಜ್ಯೋತಿರಾಜ್ ಹೊಸಪೇಟೆಯಲ್ಲಿ ಸ್ಥಾಪನೆ ಆಗಿರುವ 405 ಅಡಿ ಎತ್ತರದ ಧ್ವಜಸ್ತಂಭ ಏರಿ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. ಧ್ವಜಸ್ತಂಭ ಏರಿದ ಜ್ಯೋತಿರಾಜ್ ಅದರಲ್ಲಿನ ನೆಟ್ಟುಗಳನ್ನು ಸಹ ಫಿಟ್ ಮಾಡಿದ್ದಾರೆ. ಈ ಮೂಲಕ 405 ಅಡಿ ಧ್ವಜಸ್ತಂಭ ಏರಿ ಸೈ ಎನಿಸಿಕೊಂಡಿದ್ದಾರೆ. ಧ್ವಜಸ್ತಂಭದಲ್ಲಿ ಹಗ್ಗ ಕೂಡ ಸುತ್ತಿಕೊಂಡಿತ್ತು. ಅದನ್ನು ಸರಿಪಡಿಸಿರುವೆ. ಮೇಲೇರಿ ಕೆಲಸ ಮಾಡಿರುವೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಈ ಕಾರ್ಯ ಮಾಡಿದ ಖುಷಿ ಇದೆ ಎಂದು ಜ್ಯೋತಿರಾಜ್​ ವಿಡಿಯೋದಲ್ಲಿ ಹೇಳಿದ್ದಾರೆ.

ABOUT THE AUTHOR

...view details