ಕರ್ನಾಟಕ

karnataka

ETV Bharat / videos

ಅತಿವೇಗದ ಚಾಲನೆ.. ಟಿಪ್ಪರ್​ ಕೀ ಕಸಿದುಕೊಂಡು ರಸ್ತೆ ಸರಿ ಮಾಡುವಂತೆ ಶಾಸಕರ ತಾಕೀತು - ಈಟಿವಿ ಭಾರತ

By

Published : Sep 7, 2022, 6:25 PM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಟಿಪ್ಪರ್​ ಚಾಲಕನ ಅತಿವೇಗದ ಚಾಲನೆಯಿಂದ ಆಕ್ರೋಶಗೊಂಡ ಶಾಸಕ ಟಿ ವೆಂಕಟರಮಣಯ್ಯ, ಲಾರಿ ಕೀ ಕಸಿದುಕೊಂಡು ರಸ್ತೆ ಸರಿಪಡಿಸುವಂತೆ ತಾಕೀತು ಮಾಡಿರುವ ಘಟನೆ ನಡೆದಿದೆ. ಶಾಸಕ ಟಿ ವೆಂಕಟರಮಣಯ್ಯ ಕಾರ್ಯಕ್ರಮದ ನಿಮಿತ್ತ ಕನಕೇನಹಳ್ಳಿ ಮಾರ್ಗದಲ್ಲಿ ತೆರಳುತ್ತಿದ್ದರು. ಟಿಪ್ಪರ್​ ಚಾಲಕನ ವೇಗದ ಚಾಲನೆ ಕಂಡು ಕಂಡು ಆತಂಕಗೊಂಡಿದ್ದಾರೆ. ಟಿಪ್ಪರ್​ನ್ನು ತಡೆದ ಶಾಸಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಹಳೇಕೋಟೆ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯ ಕ್ರಷರ್ ಗಳಿದ್ದು, ಕ್ರಷರ್ ನಿಂದ ಜಲ್ಲಿಕಲ್ಲು, ಎಂ ಸ್ಯಾಂಡ್ ತುಂಬಿಕೊಂಡು ಬರುವ ಟಿಪ್ಪರ್​ ಚಾಲಕರು ಅತಿವೇಗವಾಗಿ ಚಾಲನೆ ಮಾಡುತ್ತಾರೆ. ಟಿಪ್ಪರ್​ಗಳ ಅತಿಯಾದ ವೇಗ ಮತ್ತು ಮಿತಿ ಮೀರಿದ ಲೋಡ್ ಸಾಗಿಸುವುದರಿಂದ ರಸ್ತೆಗಳು ಹಾಳಾಗಿವೆ. ಹಳ್ಳ ಬಿದ್ದ ರಸ್ತೆಗಳಿಂದ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕೂಡಲೇ ರಸ್ತೆ ಸರಿಪಡಿಸುವಂತೆ ಚಾಲಕನಿಗೆ ಶಾಸಕರು ತಾಕೀತು ಮಾಡಿದರು. ಎರಡು ದಿನಗಳ ಹಿಂದೆ ಮೂಗೇನಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದ.

ABOUT THE AUTHOR

...view details