ಗಾಳಿಯಲ್ಲಿ ಗುಂಡು ಹಾರಿಸಿದ ಶಾಸಕ ಕೆ ಶಿವನಗೌಡ ನಾಯಕ: ವಿಡಿಯೋ ವೈರಲ್ - ಗಾಳಿಯಲ್ಲಿ ಗುಂಡು ಹಾರಿಸಿದ ಶಾಸಕ ಕೆ ಶಿವನಗೌಡ ನಾಯಕ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿನ ತಮ್ಮ ನಿವಾಸದಲ್ಲಿ ಆಯುಧ ಪೂಜೆ ಹಿನ್ನೆಲೆ ಶಾಸಕ ಕೆ ಶಿವನಗೌಡ ನಾಯಕ ತಮ್ಮ ಭುಜದ ಮೇಲೆ ಕೋವಿ ಇರಿಸಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಯುಧ ಪೂಜೆ ಪ್ರಯುಕ್ತವಾಗಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಅಲ್ಲದೇ, ಈ ವಿಡಿಯೋ ಕಳೆದ ವರ್ಷದಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಈ ಬಾರಿಯ ಆಯುಧ ಪೂಜೆ ದಿನದಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶಾಸಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಇದು ಕಳೆದ ಬಾರಿಯ ವಿಡಿಯೋ. ಆಯುಧ ಪೂಜೆ ಹಿನ್ನೆಲೆಯಲ್ಲಿ ಗುಂಡು ಹಾರಿಸಲಾಗಿತ್ತು. ಆದ್ರೆ ಈ ಬಾರಿ ಗುಂಡನ್ನು ಹಾರಿಸಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.