ನಾನು ಡ್ಯಾನ್ಸ್ ಕಲಿತಿಲ್ಲ, ಬೇರೆಯವರನ್ನು ಕುಣಿಸೋದನ್ನ ಚೆನ್ನಾಗಿ ಕಲಿತಿದ್ದೇನೆ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿಯಲ್ಲಿ ಕಾಮಿಡಿ ಚಾರಿಟೇಬಲ್ ಶೋ
ಬೆಳಗಾವಿ: ನಾನು ಡ್ಯಾನ್ಸ್ ಕಲಿತಿಲ್ಲ. ಆದರೆ ಬೇರೆಯವರನ್ನು ಕುಣಿಸೋದನ್ನ ಚೆನ್ನಾಗಿ ಕಲಿತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಗರದ ಕೆಎಲ್‍ಇ ಜೀರಿಗೆ ಸಭಾಗೃಹದಲ್ಲಿ ರಾಜು ಪವಾರ್ ಫೌಂಡೇಶನ್ ವತಿಯಿಂದ ಕಾಮಿಡಿ ಚಾರಿಟೇಬಲ್ ಶೋದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು. ಭಾಷೆ-ವೇಷ ಬೇರೆಯಾದರು ನಾವೆಲ್ಲರೂ ಭಾರತೀಯರೇ ಎಂದರು. ಕೊರೊನಾ ಕಾಲದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದದ್ದು. ಅವರಿಗೂ ಮನೋರಂಜನೆ ಸಿಗಲೆಂದು ರಾಜು ಪವಾರ್ ಆಯೋಜಿಸಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು. ಇದೇ ವೇಳೆ ಮಾತನಾಡಿದ ಲಕ್ಷ್ಮೀ, ನನಗೆ ಡ್ಯಾನ್ಸ್ ಮಾಡೋದಕ್ಕೆ ಬರೊದಿಲ್ಲ. ಆದರೆ, ನಾನು ಬೇರೆಯವರನ್ನು ಡ್ಯಾನ್ಸ್ ಮಾಡಿಸುತ್ತೇನಿ ಎನ್ನುತ್ತಲೇ ವಿರೋಧಿಗಳಿಗೆ ಟಾಂಗ್ ನೀಡಿದರು.
Last Updated : Jul 5, 2022, 2:21 PM IST