ಇದು ಬೆಡಗಿಯರ ಮಾಯಾಲೋಕವಲ್ಲ... ಯಂಗ್ 70ಗಳ ಚಲುವಿನ ಚಿತ್ತಾರ!! - electronic city bengaluru
ಫ್ಯಾಷನ್ ಶೋ ಎಂದಾಕ್ಷಣ ಕಣ್ಣಿಗೆ ಕಟ್ಟೊದು ಯುವಕ ಯುವತಿಯರು ಬಣ್ಣ ಬಣ್ಣದ ಉಡುಗೆ ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತ ಕಣ್ಸನ್ನೆಯಲ್ಲೇ ವೀಕ್ಷಕರನ್ನು ಮೋಡಿ ಮಾಡೋದು. ಇನ್ನೂ ಕೆಲವೊಮ್ಮೆ ಪುಟಾಣಿ ಮಕ್ಕಳ ಫ್ಯಾಷನ್ ಶೋ ಕೂಡ ಆಯೋಜಿಸಲಾಗುತ್ತದೆ. ಆದರೆ, ಇದೀಗ ಫ್ಯಾಷನ್ ಲೋಕ ಯಾವುದೋ ಒಂದು ವಯೋಮಾನದವರಿಗೆ ಸೀಮಿತವಾಗಿಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ.