ಕರ್ನಾಟಕ

karnataka

ETV Bharat / videos

ಕೋಲಾರ ಚೂರಿ ಇರಿತ ಪ್ರಕರಣ.. ಆರ್​ಎಸ್​ಎಸ್ ಮುಖಂಡನ ಆರೋಗ್ಯ ವಿಚಾರಿಸಿದ ಸಚಿವರು - ಆರ್​ಎಸ್​ಎಸ್ ಮುಖಂಡ ರವಿಕುಮಾರ್

By

Published : Aug 7, 2022, 4:47 PM IST

ಕೋಲಾರ : ಜಿಲ್ಲೆಯ ಮಾಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಚಿವರಾದ ಮುನಿರತ್ನ, ಬೈರತಿ ಬಸವರಾಜ ಹಾಗೂ ಸಂಸದ ಮುನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಆರ್​ಎಸ್​ಎಸ್ ಮುಖಂಡ ರವಿಕುಮಾರ್ ಆರೋಗ್ಯ ವಿಚಾರಿಸಿ, ದೈರ್ಯ ಹೇಳಿದರು. ಮಾಲೂರು ಪಟ್ಟಣದ ಮಾರಿಕಾಂಬ ದೇವಾಲಯದ ಬಳಿ ಶನಿವಾರ ಆರ್​ಎಸ್​ಎಸ್ ಮುಖಂಡ ರವಿ ಅವರಿಗೆ ಅನ್ಯಕೋಮಿನ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದರು. ಪಟ್ಟಣದಲ್ಲಿರುವ ರವಿ ಸ್ಟೀಲ್ ಅಂಗಡಿ ಎದುರು ಇಬ್ಬರು ವ್ಯಕ್ತಿಗಳು ಜಗಳ ಮಾಡಿಕೊಳ್ಳುತ್ತಿದ್ದಾಗ ಬಿಡಿಸಲು ಹೋಗಿದ್ದ ವೇಳೆ ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ಮಾಲೂರು ಪೊಲೀಸರು ಓರ್ವ ಆರೋಪಿ ಸಯ್ಯದ್ ವಸೀಂ ಎಂಬುವರನ್ನು ಬಂಧಿಸಿದ್ದಾರೆ.

ABOUT THE AUTHOR

...view details