ಸಚಿವ ಸೋಮಣ್ಣ ಸಿಎಂ ಆಗಬೇಕು: ಶಾಸಕ ಶಿವನಗೌಡ ನಾಯಕ್ - ಚಾಮರಾಜನಗರ
ಚಾಮರಾಜನಗರ : ಜಿಲ್ಲೆಯಲ್ಲಿ ಆಯೋಜಿಸಿದ್ದ ಸಚಿವ ಸೋಮಣ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶಿವನಗೌಡ ನಾಯಕ್ ಸಚಿವ ಸೋಮಣ್ಣ ರೀತಿ ಎಲ್ಲರನ್ನೂ ಒಳಗೊಳ್ಳುವ ರಾಜಕಾರಣಿ ಮತ್ತೊಬ್ಬರಿಲ್ಲ. ಸೋಮಣ್ಣ ಸಿಎಂ ಆಗಬೇಕು. ಅವರೇನಾದರೂ ಮುಖ್ಯಮಂತ್ರಿ ಆದರೇ ಎಲ್ಲ ಸಿಎಂಗಳನ್ನು ಮೀರಿಸುವ ಕೆಲಸ ಮಾಡುತ್ತಾರೆ. ಸೋಮಣ್ಣ ಅಭಿಮಾನಿಯಾಗಿ ಅವರು ಸಿಎಂ ಆಗಲಿ ಎಂದು ಹೇಳಿದ್ದು, ದೇವರ ಆಶೀರ್ವಾದ ಇದ್ದರೇ ಖಂಡಿತಾ ಆಗುತ್ತಾರೆ. ಅವರು ಆಗಬೇಕೆಂಬುದು ನಮ್ಮ ಅಭಿಲಾಷೆ ಎಂದರು.