ಕೆಸರಲ್ಲಿ ಸಿಲುಕಿದ ಕಾಲು... ಹೊರಬರಲು ಸಚಿವ ಬೈರತಿ ಬಸವರಾಜ್ ಪರದಾಟ: VIDEO - heavy rain in chikkamagalur district
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಭಾರೀ ಮಳೆ ನಾನಾ ಅವಾಂತರಗಳನ್ನು ಸೃಷ್ಟಿಸಿದೆ. ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ನೂತನವಾಗಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬೈರತಿ ಬಸವರಾಜ್ ಇಂದು ಭೇಟಿ ನೀಡಿದರು. ಮೂಡಿಗೆರೆ ತಾಲೂಕಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರೆನೂರಿನಲ್ಲಿ ತೋಟ ಕುಸಿತವಾದ ಪ್ರದೇಶದಲ್ಲಿ ವೀಕ್ಷಣೆಗೆ ತೆರಳಿದ್ದ ವೇಳೆ ಸಚಿವ ಬೈರತಿ ಬಸವರಾಜ್ ಕಾಲು ಕೆಸರಲ್ಲಿ ಹೂತುಕೊಂಡಿದ್ದು, ಕಾಲು ಹೊರ ತೆಗೆಯಲು ಹರಸಾಹಸ ನಡೆಸಿದ್ದಾರೆ. ಕೆಲ ನಿಮಿಷಗಳ ಬಳಿಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಕೆಸರಿನಿಂದ ಆಚೆ ಬಂದಿದ್ದಾರೆ.