ಕೋರ್ಟ್ಗೆ ಹಾಜರು ಪಡಿಸುವಾಗ ಮೀಸೆ ತಿರುವಿದ ಕೇಂದ್ರ ಸಚಿವರ ಪುತ್ರ-ವಿಡಿಯೋ - ಮೀಸೆ ತಿರುವಿದ ಕೇಂದ್ರ ಸಚಿವರ ಪುತ್ರ.
ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರ ಮೇಲೆ ಕಾರು ಹತ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಇಂದು ಲಖನೌ ವಿಶೇಷ ಕೋರ್ಟ್ಗೆ ಹಾಜರಾದರು. ನ್ಯಾಯಾಲಯಕ್ಕೆ ತೆರಳುವ ಮುಂಚೆ ಅವರು ಮೀಸೆ ತಿರುವಿಕೊಳ್ಳುತ್ತ ಸಾಗಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಕಾರು ಹರಿಸಿರುವ ಘಟನೆ ನಡೆದಿತ್ತು. ಬಳಿಕ ಉಂಟಾದ ಹಿಂಸಾಚಾರದಲ್ಲಿ ನಾಲ್ವರು ಅನ್ನದಾತರು ಹಾಗೂ ಓರ್ವ ಪತ್ರಕರ್ತ ಸಾವನ್ನಪ್ಪಿದ್ದರು.