ಶ್ರೀಲಂಕಾದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ: ತುರ್ತು ಪರಿಸ್ಥಿತಿ ಘೋಷಿಸಿದ ಹಂಗಾಮಿ ಅಧ್ಯಕ್ಷ ವಿಕ್ರಮಸಿಂಘೆ - ಅಶ್ರುವಾಯು ಪ್ರಯೋಗ
ಕೊಲಂಬೊ(ಶ್ರೀಲಂಕಾ): ನೆರೆಯ ದ್ವೀಪದೇಶ ಶ್ರೀಲಂಕಾದಲ್ಲಿ ಪರಿಸ್ಥಿತಿ ಮತ್ತೆ ಕೈಮೀರಿ ಹೋಗುತ್ತಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ಗೆ ಪಲಾಯನ ಮಾಡುವ ಸುದ್ದಿ ಹೊರಬೀಳುತ್ತಿದ್ದಂತೆ ಸಾವಿರಾರು ಪ್ರತಿಭಟನಾಕಾರರು ಕೊಲಂಬೊದಲ್ಲಿರುವ ಸಂಸತ್ ಭವನ ಮತ್ತು ಪ್ರಧಾನಿ ಕಚೇರಿ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಕೊಲಂಬೊದಲ್ಲಿರುವ ಪ್ರಧಾನಿ ನಿವಾಸ ಪ್ರವೇಶಿಸಲು ಕಾಂಪೌಂಡ್ ಗೋಡೆ ಹತ್ತಿದ ಪ್ರತಿಭಟನಾಕಾರರನ್ನು ಚದುರಿಸಲು ಮಿಲಿಟರಿ ಸಿಬ್ಬಂದಿ ಅಶ್ರುವಾಯು ಪ್ರಯೋಗಿಸಿದರು. ಇನ್ನೊಂದೆಡೆ, ಪ್ರಧಾನಿ ಸ್ಥಾನದಲ್ಲಿರುವ ರನಿಲ್ ವಿಕ್ರಮಸಿಂಘೆ ದೇಶದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ಕರೆಸಲಾಗಿದೆ.
Last Updated : Jul 13, 2022, 1:35 PM IST