ಮೌನೇಶ್ವರ ಜಯಂತಿ ಹಿನ್ನೆಲೆ: ವಿಶ್ವಕರ್ಮ ಸಮಾಜದಿಂದ ಉಚಿತ ಉಪನಯನ, ಸಾಮೂಹಿಕ ವಿವಾಹ - ವಿಶ್ವಕರ್ಮ ಸಮಾಜ ಪ್ರತಿ ವರ್ಷ ಶ್ರೀ ಮೌನೇಶ್ವರ ಜಯಂತಿ ಕಾರ್ಯಕ್ರಮ
ಭಾವೈಕ್ಯತೆಯ ಸಂತ ಜಗದ್ಗುರು ಶ್ರೀ ಮೌನೇಶ್ವರರ ಜಯಂತಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದ ವಿಶ್ವಕರ್ಮ ವಟುಗಳಿಗೆ ಉಚಿತ ಉಪನಯನ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶ್ವಕರ್ಮ ಸಮಾಜ ಪ್ರತಿ ವರ್ಷ ಶ್ರೀ ಮೌನೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅದರಂತೆ ಈ ವರ್ಷವೂ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಸುಮಾರು 35 ವಟುಗಳಿಗೆ ಉಚಿತ ಉಪನಯನ ಹಾಗೂ 22 ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸಲಾಯಿತು.