ಕೊರೊನಾ ವೈರಸ್ ಹೆಸರಲ್ಲಿ ವ್ಯಕ್ತಿಯಿಂದ ಮಾಸ್ಕ್ ಮಾರಾಟ: ವಿಡಿಯೋ ವೈರಲ್ - ಆದರೇ ಈತ ರೋಗದ ಹೆಸರನ್ನು ಹೇಳಿ ಮಾರಾಟ
ಹುಬ್ಬಳ್ಳಿ: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಅಸ್ತ್ರವಾಗಿಟ್ಟಕೊಂಡ ವ್ಯಕ್ತಿವೋರ್ವ 'ಕೊರೊನಾ ಕೊರೊನಾ ಎಂದು ಮಾಸ್ಕ್ ಮಾರಾಟ' ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರೊನಾ ಕೊರೊನಾ 20 ರೂಪಾಯಿಗೆ ಒಂದು ಎಂದು ಕೂಗಿ ಕೂಗಿ ಮಾಸ್ಕ್ ಮಾರಾಟ ಮಾಡುತ್ತಿದ್ದಾನೆ. ಗ್ರಾಹಕರನ್ನು ಆಕರ್ಷಿಸಲು ವಿವಿಧ ಕಸರತ್ತುಗಳನ್ನು ಈ ವ್ಯಕ್ತಿ ಮಾಡುತ್ತಿದ್ದಾನೆ.