ಕರ್ನಾಟಕ

karnataka

ETV Bharat / videos

VIDEO: ನಾಗರ ಹಾವಿನ ಕಡಿತದಿಂದ ಮಗನನ್ನು ಕಾಪಾಡಿದ್ರು ತಾಯಿ - mandya cobra news

By

Published : Aug 13, 2022, 4:59 PM IST

ಮಂಡ್ಯ: ತಾಯಿಯ ಸಮಯಪ್ರಜ್ಞೆ ಹಾಗೂ ಸಾಹಸದಿಂದ ಬಾಲಕ ಸ್ವಲ್ಪದರಲ್ಲೇ ನಾಗರ ಹಾವಿನ ಕಡಿತದಿಂದ ಬಚಾಚಾದ ಘಟನೆ ಮಂಡ್ಯದ ಚಾಮುಂಡೇಶ್ವರಿ ಬಡಾವಣೆ ಮನೆಯೊಂದರ ಬಳಿ ನಡೆದಿದೆ. ಕೆ.ಎಂ.ದೊಡ್ಡಿ ವೈದ್ಯ ಡಾ.ವಿಷ್ಣು ಪ್ರಸಾದ್ ಮತ್ತು ಪ್ರಿಯಾ ದಂಪತಿ ಪುತ್ರ ನಾಗರಹಾವಿನ ಕಡಿತದಿಂದ ಪಾರಾಗಿದ್ದಾನೆ. ಮನೆ ಬಾಗಿಲೆದುರು ಮೆಟ್ಟಿಲಿನ ಬಳಿ ನಾಗರಹಾವೊಂದು ಹರಿದುಬಂದಿದ್ದು, ಬಾಲಕ ಅದನ್ನು ಗಮನಿಸದೆ ಹೆಜ್ಜೆ ಇಟ್ಟಿದ್ದಾನೆ. ಬಳಿಕ ಭಯಭೀತನಾದ ಬಾಲಕ ಮನೆಯೊಳಗೆ ಓಡಲು ಮುಂದಾಗಿದ್ದು, ಆಗ ಹಾವು ಹೆಡೆಯೆತ್ತಿ ನಿಂತಿತ್ತು. ತಕ್ಷಣ ಜೊತೆಗಿದ್ದ ತಾಯಿಯ ಮಗನನ್ನು ಹಿಂದಕ್ಕೆ ಎಳೆದು ಎತ್ತಿಕೊಂಡು ಹಾವಿನಿಂದ ಕಾಪಾಡಿದ್ದಾರೆ. ಎದೆ ಝಲ್ ಎನ್ನಿಸುವ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮ್ಮನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details