Video: ಪ್ರವಾಹ ಪೀಡಿತ ರಸ್ತೆ ದಾಟಲು ಹೋಗಿ, ಕೊಚ್ಚಿ ಹೋದ ವ್ಯಕ್ತಿ - ಆಂಧ್ರಪ್ರದೇಶದಲ್ಲಿ ಮಳೆಯಾರ್ಭಟ
ತೆಲಂಗಾಣ, ಆಂಧ್ರಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗ್ತಿದ್ದು, ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಅನೇಕ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಬೆನ್ನಲ್ಲೇ ಪ್ರವಾಹ ಪೀಡಿತ ರಸ್ತೆ ದಾಟಲು ಹೋಗಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರವಾಹದಿಂದಾಗಿ ತುಂಬಿ ಹರಿಯುತ್ತಿದ್ದ ರಸ್ತೆ ದಾಟಲು ಹೋದಾಗ ಈ ಘಟನೆ ನಡೆದಿದೆ. ಕೊನೆಯದಾಗಿ ಆತನ ರಕ್ಷಣೆ ಮಾಡುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆಂದು ತಿಳಿದು ಬಂದಿದೆ.