ಕರ್ನಾಟಕ

karnataka

ETV Bharat / videos

ನೀರಿನಲ್ಲಿ ಕೊಚ್ಚಿಹೋದ ಬಾಲಕ, ಯುವಕ: ಪ್ರಾಣಾಪಾಯದಿಂದ ಪಾರು - Gulur lake in Tumkur

By

Published : Aug 6, 2022, 2:30 PM IST

ತುಂಬಿ ಹರಿಯುತ್ತಿರುವ ತುಮಕೂರಿನ ಗೂಳೂರು ಕೆರೆಯಲ್ಲಿ ಹುಚ್ಚಾಟ ಆಡಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ ಹಾಗೂ ಓರ್ವ ಬಾಲಕನನ್ನು ಸ್ಥಳೀಯರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ನಡೆದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿದೆ. ಕೆರೆ ಕೋಡಿ ಬಳಿ ನೀರಿನಲ್ಲಿ ಆಟ ಆಡಲು ಹೋಗಿದ್ದ ಯುವಕರ ತಂಡ‌ದಲ್ಲಿ, ಬಾಲಕನನ್ನು ವ್ಯಕ್ತಿಯೊಬ್ಬ ಹರಿಯುವ ನೀರಿಗೆ ತಳ್ಳುತ್ತಿರುವುದು ಕಂಡು ಬಂದಿದೆ. ಆ ವೇಳೆ ಬಾಲಕ ನೀರಿನಲ್ಲಿ ಆಯತಪ್ಪಿ ಬಿದ್ದು ಕೊಚ್ಚಿಕೊಂಡು ಹೋಗುವ ದೃಶ್ಯ ಭಯ ಹುಟ್ಟಿಸಿದ್ದು, ನಂತರ ಆ ವ್ಯಕ್ತಿ ಹರಸಾಹಸ ಪಟ್ಟು ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನನ್ನು ಕಾಪಾಡಿದ್ದಾನೆ.

ABOUT THE AUTHOR

...view details