ಸಹಜ ಸ್ಥಿತಿಗೆ ಮರಳಿದ "ಮಲ್ಪೆ"... ಕೃಷ್ಣನಗರಿಗೆ ಸೇರಲಿವೆ ಇನ್ನಷ್ಟು ಬೀಚ್! - Malpe Beach News
ಉಡುಪಿ: ಚಂಡಮಾರುತ ಪ್ರಕೃತಿ ವಿಕೋಪ ಬಳಿಕ ಮಲ್ಪೆ ಬೀಚ್ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ರಜಾ ದಿನ ಕಳೆಯಲು ಪ್ರತಿ ನಿತ್ಯ ನೂರಾರು ಜನ ಇಲ್ಲಿಗೆ ಆಗಮಿಸಿ ಎಂಜಾಯ್ ಮಾಡ್ತಿದ್ದಾರೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ, ಬೀಚ್ಗಳು ಐಲ್ಯಾಂಡ್ಗಳು, ರೆಸಾರ್ಟ್ಗಳು ಜೊತೆಗೆ ಪ್ರಸಿದ್ಧ ದೇಗುಲಗಳು ಹೀಗೆ ರಜೆಯ ಮಜಾ ಅನುಭವಿಸಲು ಉಡುಪಿ ಜಿಲ್ಲೆ ಸೂಕ್ತ ತಾಣವಾಗಿದೆ. ಸದ್ಯ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿರುವ ಹಿನ್ನೆಲೆ ಹೊಸ ಬೀಚ್ ಗಳಿಗೂ ಕಾಯಕಲ್ಪ ಒದಗಿಸಲಾಗಿದೆ, ಈ ಮೂಲಕ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ಇನ್ನಷ್ಟು ರಂಜನೀಯ ಕ್ಷೇತ್ರಗಳು ದೊರೆಯಲಿವೆ.
Last Updated : Dec 1, 2019, 5:13 PM IST