ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಹೋದ ಅನ್ನದಾತನ ಬದುಕು: ಬೆಳೆಗಳೆಲ್ಲಾ ನೀರುಪಾಲು - kannadanews
ಪ್ರವಾಹಕ್ಕೆ ಕೊಚ್ಚಿಹೋಗಿರುವ ಬೇಳೆಗಳು, ಜಮೀನಿನಲ್ಲಿ ಕೊಳೆತಿರೋ ವಿವಿಧ ಬೆಳೆಗಳು.. ಹೌದು ಈ ದೃಶ್ಯಗಳೆಲ್ಲಾ ಕಂಡು ಬಂದಿದ್ದು ಗದಗ ಜಿಲ್ಲೆ ನರಗುಂದ ಹಾಗೂ ರೋಣ ತಾಲೂಕಿನ ಪ್ರವಾಹ ಪೀಡಿತ ಹಳ್ಳಿಗಳಲ್ಲಿ. ಕಳೆದ 15 ದಿನಗಳ ಹಿಂದೆ ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹ ಮನೆಗಳನ್ನು ಮಾತ್ರ ಹಾಳು ಮಾಡಿಲ್ಲ. ಬದಲಾಗಿ ರೈತರು ಕಷ್ಟಪಟ್ಟು ಬೆಳೆದಿದ್ದ ಮೆಕ್ಕೆಜೋಳ, ಹೆಸರು, ಹತ್ತಿ, ಶೇಂಗಾ ಸೇರಿದಂತೆ ಹಲವಾರು ಬೆಳೆಗಳನ್ನು ಆಹುತಿ ಮಾಡಿದೆ.