ಕಾಪಾಡಿ... ಕಾಪಾಡಿ ಎಂಬ ಚೀರಾಟ: ಕಲಬುರಗಿ ಬಸ್ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾತು - ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ
ಕಲಬುರಗಿ ಹೊರವಲಯದ ಬಳಿ ನಡೆದ ವೋಲ್ವೋ ಬಸ್ ಭೀಕರ ಅಪಘಾತ ಪ್ರಕರಣದಲ್ಲಿ ಏಳು ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಬೆಳಗ್ಗೆ 6:30ರಿಂದ 7 ಗಂಟೆ ನಡುವೆ ಅಪಘಾತ ಸಂಭವಿಸಿದ್ದು, ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಶಬ್ಧವಾಯಿತು. ಅಲ್ಲಿಗೆ ತೆರಳಿ ನೋಡುವಷ್ಟರಲ್ಲಿ ಬಸ್ಗೆ ಬೆಂಕಿ ಹತ್ತಿಕೊಂಡಿತ್ತು. ಈ ವೇಳೆ ಕೆಲವರು ಹೊರ ಬಂದರೆ, ಇನ್ನೂ ಹಲವರು ಕಾಪಾಡಿ... ಕಾಪಾಡಿ ಎಂದು ಚೀರಾಡುತ್ತಿದ್ದರು. ವೇಗವಾಗಿ ಬಂದಿರುವ ಬಸ್ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ಬ್ರಿಡ್ಜ್ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದಿದೆ ಎಂದು ತಿಳಿಸಿದರು. ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅದರೊಳಗೆ ಹೋಗಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ನೀಡಿದರು.