ಧಾರಾಕಾರ ಮಳೆಗೆ ಮೆಕ್ಕೆಜೋಳ ನೀರುಪಾಲು ರೈತರ ಗೋಳು - ಪರಿಹಾರ ನೀಡುವಂತೆ ರೈತರ ಮನವಿ
ಹಾವೇರಿ: ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಮೆಕ್ಕೆಜೋಳ ನೀರುಪಾಲಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದಿದೆ. ರಾಶಿ ಮಾಡಿದ ಮೆಕ್ಕೆಜೋಳವನ್ನು ಒಣಗಿಸಿ ಮಾರುಕಟ್ಟೆಗೆ ಸಾಗಿಸಬೇಕು ಅನ್ನೋವಷ್ಟರಲ್ಲಿ ಸುಮಾರು ಏಳೆಂಟು ಜನ ರೈತರಿಗೆ ಸೇರಿದ ಮೆಕ್ಕೆಜೋಳ ನೀರುಪಾಲಾಗಿದೆ. ನೀರಲ್ಲಿದ್ದ ಮೆಕ್ಕೆಜೋಳ ಬೇರ್ಪಡಿಸಲು ರೈತರು ಪರದಾಡಿದ್ದಾರೆ. ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತರು ಕೈಮುಗಿದು ಮನವಿ ಮಾಡಿದ್ದಾರೆ.