ಮಳೆಯಿಂದಾದ ಹಳ್ಳಕ್ಕೆ ಸಿಲುಕಿದ ಲಾರಿ - ಗುಂಡ್ಲುಪೇಟೆ ರಸ್ತೆಯಲ್ಲಿ 2 ತಾಸು ಟ್ರಾಫಿಕ್ ಕಿರಿಕಿರಿ - ಚಾಮರಾಜನಗರದ ಗುಂಡ್ಲುಪೇಟೆ ರಸ್ತೆ
ಮಳೆಗೆ ಗುಂಡಿ ಬಿದ್ದ ರಸ್ತೆಯಲ್ಲಿ ಸರಕು ತುಂಬಿದ ಲಾರಿಯೊಂದು ಸಿಲುಕಿ ಬರೋಬ್ಬರಿ 2 ತಾಸು ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಜೆಸಿಬಿ ಸಹಾಯದಿಂದಲೂ ಲಾರಿ ಮೇಲಕ್ಕೆತ್ತಲಾಗದೇ ಕ್ರೇನ್ ತರಿಸಿ ಹಳ್ಳದಿಂದ ಲಾರಿಯನ್ನು ತೆರವುಗೊಳಿಸಲು ಸಂಚಾರಿ ಠಾಣೆ ಪೊಲೀಸರು ಸುಸ್ತು ಹೊಡೆದರು. ಮಳೆಯಿಂದ ರಸ್ತೆಯೆಲ್ಲಾ ಗುಂಡಿ ಬಿದ್ದಿದ್ದು, ಭಾರೀ ಗಾತ್ರದ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಿದೆ.