ವಿಜಯಪುರದಲ್ಲಿ ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಲಾರಿ.. ವಿಡಿಯೋ - ಇಂಡಿ ಬಳಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಲಾರಿ
ವಿಜಯಪುರ: ಚಲಿಸುತ್ತಿದ್ದ ಲಾರಿಯ ಇಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ರಸ್ತೆಯಲ್ಲಿ ನಡೆದಿದೆ. ಬೆಂಕಿ ಕಂಡ ತಕ್ಷಣ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗಿಳಿದಿದ್ದಾರೆ. ಪೆಟ್ರೋಲ್ ಪಂಪ್ ಬಳಿಯೇ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಲಕಾಲ ಆತಂಕ ಮೂಡಿಸಿತ್ತು. ಸ್ಥಳಕ್ಕೆ ಝಳಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.