ಪರಿಪರಿಯಾಗಿ ಬೇಡಿಕೊಂಡ ಅಜ್ಜಿ: ಮೇವು ತೆಗೆದುಕೊಂಡು ಹೋಗುತ್ತಿದ್ದ ಎತ್ತಿನಗಾಡಿಗೆ ಅನುಮತಿ ನೀಡಿದ ಪೊಲೀಸರು - Raichur central bus stand
ರಾಯಚೂರು: ಕೊರೊನಾ ಸೋಂಕಿನಿಂದ ರಾಯಚೂರು ನಗರ ಸ್ತಬ್ಧವಾಗಿದ್ದು, ವಾಹನಗಳ ಓಡಾಡಟವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಮಧ್ಯೆ ನಗರ ಕೇಂದ್ರೀಯ ಬಸ್ ನಿಲ್ದಾಣದ ಬಳಿ ವಾಹನ ಸಂಚಾರ ಮಾಡದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಅದೇ ಮಾರ್ಗದಲ್ಲಿ ರೈತನೊಬ್ಬ ತಮ್ಮ ಜಮೀನಿಗೆ ತೆರಳಿ ಜಾನುವಾರುಗಳಿಗೆ ಮೇವು ತೆಗೆದುಕೊಂಡು ಹೋಗುತ್ತಿದ್ದರು. ಆಗ ಎತ್ತಿನ ಗಾಡಿಯನ್ನು ಬಿಡಲು ಪೊಲೀಸರು ನಿರಾಕರಿಸಿದರು. ಗಾಡಿಯಲ್ಲಿದ್ದ ಅಜ್ಜಿ ಪೊಲೀಸರಲ್ಲಿ ಮನವಿ ಮಾಡಿಕೊಂಡ ನಂತರ ಮನಕರಗಿದ ಆರಕ್ಷಕರು ಎತ್ತಿನ ಗಾಡಿಗೆ ಅನುಮತಿ ನೀಡಿದರು.