ಮಳೆ ನೀರು ಕುಡಿದು ದಾಹ ನೀಗಿಸಿಕೊಂಡ ಸಿಂಹಗಳು- ವಿಡಿಯೋ - ಗಿರ್ ಅರಣ್ಯ ಪ್ರದೇಶದಲ್ಲಿ ಮಳೆ ನೀರಲ್ಲಿ ಸಿಂಹಗಳು
ಗುಜರಾತ್ನ ಗಿರ್ ಅರಣ್ಯ ಪ್ರದೇಶವನ್ನು ಮೊದಲ ಮಳೆ ತೋಯಿಸಿದೆ. ದಟ್ಟ ಕಾಡಿನಲ್ಲಿ ನೀರು ಹರಿಯಲು ಶುರುವಾಗಿದೆ. ಛಾಯಾಗ್ರಾಹಕ ಕರೀಮ್ ಕದಿವರ್ ಎಂಬುವವರು ಮಳೆ ನೀರಿನಲ್ಲಿ ತಮ್ಮ ದಾಹವನ್ನು ತಣಿಸಿಕೊಳ್ಳುತ್ತಿರುವ ಸಿಂಹದ ಕುಟುಂಬದ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮಳೆಯಿಂದಾಗಿ ಹರಿಯುತ್ತಿರುವ ನೀರನ್ನು ಎರಡು ಸಿಂಹಿಣಿ ಮತ್ತು ಮೂರು ಸಿಂಹದ ಮರಿಗಳು ಕುಡಿದು ದಾಹ ತೀರಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.