ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಂದೆ, ಮಗಳ ಮೇಲೆ ಚಿರತೆ ದಾಳಿ! - ತಂದೆ, ಮಗಳ ಮೇಲೆ ಚಿರತೆ ದಾಳಿ
ಮಹಾರಾಜ್ಗಂಜ್(ಉತ್ತರಪ್ರದೇಶ): ತೂತಿಬರಿ ಪ್ರದೇಶದ ಮಾಧವಲಿಯ ಅರಣ್ಯ ಪ್ರದೇಶದ ಕಿಶನ್ಪುರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿರುವ ಚಿರತೆಯೊಂದು ತಂದೆ, ಮಗಳ ಮೇಲೆ ದಾಳಿ ನಡೆಸಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅವರು ಇದೀಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಮನೆಯಲ್ಲಿ ಮಂಚದ ಮೇಲೆ ಮಲಗಿದ್ದ ಅಂಬಿಕಾ ಮೇಲೆ ಚಿರತೆ ದಾಳಿ ಮಾಡಿದ್ದು, ಈ ವೇಳೆ ರಕ್ಷಣೆ ಮಾಡಲು ಬಂದ ತಂದೆ ಮೇಲೂ ಅದು ದಾಳಿ ಮಾಡಿದೆ. ಇದರ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.