ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಸಂಚಾರ ಪುನಾರಂಭ: ಹೇಗಿತ್ತು ದೃಶ್ಯ ವಿಡಿಯೋದಲ್ಲಿ ನೋಡಿ! - landslide in Jammu Kashmir
ಶೋಪಿಯಾನ್:ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರಕ್ಕೆ ಮಾನವ ದಾಳಿಯಲ್ಲದೇ, ಪ್ರಕೃತಿಯೂ ಹಾನಿಗೀಡು ಮಾಡುತ್ತಿದೆ. ಕಾಶ್ಮೀರ ಕಣಿವೆಯ ಶೋಪಿಯಾನ್ ಜಿಲ್ಲೆಯಲ್ಲಿ ರಾಜೌರಿ ಮತ್ತು ಪೂಂಚ್‌ಗೆ ಸಂಪರ್ಕಿಸುವ ಮೊಘಲ್ ರಸ್ತೆಯು ಭೂಕುಸಿತಕ್ಕೀಡಾಗಿ ಬಂದ್ ಆಗಿತ್ತು. ತೀವ್ರ ಗುಡ್ಡಕುಸಿತದಿಂದ ರಸ್ತೆ ಆರು ದಿನಗಳ ಕಾಲ ಮುಚ್ಚಲ್ಪಟ್ಟಿದೆ. ಇದರಿಂದ ಉಭಯ ನಗರಗಳ ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು. ರಸ್ತೆ ಮೇಲೆ ಬಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯ ಶುರುವಾಗಿದ್ದು, ಸೋಮವಾರದಿಂದ ಭಾಗಶಃ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ರಸ್ತೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮಣ್ಣನ್ನು ತೆರವು ಮಾಡಲಾಗುತ್ತಿದೆ. ನಗರಗಳಿಗೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ತೊಂದರೆ ಉಂಟಾಗಿದೆ. ಭೂಕುಸಿತದ ಅವಶೇಷಗಳನ್ನು ಸದ್ಯಕ್ಕೆ ಭಾಗಶಃ ತೆಗೆದುಹಾಕಲಾಗಿದೆ. ತೆರವು ಕಾರ್ಯಾಚರಣೆ ಮುಂದುವರಿದಿದೆ. ವಾಹನಗಳ ಸಂಚಾರವನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಣಿವೆ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದ ಕಾರಣ ಮೇ 31 ರಂದು ಮೊಘಲ್ ರಸ್ತೆಯ ರಟ್ಟಾ ಚಂಬ್ ಸೇತುವೆಯ ಬಳಿ ಭಾರಿ ಭೂಕುಸಿತ ಸಂಭವಿಸಿತ್ತು. ರಸ್ತೆ ಪಕ್ಕದ ದೊಡ್ಡ ಮಣ್ಣಿನ ಗುಡ್ಡ ಸಡಿಲಗೊಂಡು ಇಡೀ ಮಣ್ಣು ರಸ್ತೆಯ ಮೇಲೆ ಬಿದ್ದಿತ್ತು. ಇದರಿಂದ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಇದನ್ನೂ ಓದಿ:ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ.. ಐವರ ಸಾವು, 13 ಜನರಿಗೆ ಗಾಯ