ಮುಂಬೈನ ಪ್ರಸಿದ್ಧ ರಾಜ ಗಣೇಶನ ಹುಂಡಿಯಲ್ಲಿ 2 ಕೆಜಿ ಬೆಳ್ಳಿ, ಬಂಗಾರ - ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚ ರಾಗ ಗಣೇಶ
ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚ ರಾಜಾ ಗಣೇಶ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ. ವಿನಾಯಕನ ದರ್ಶನಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಐದು ದಿನಗಳಲ್ಲಿ ರಾಜ ಗಣೇಶನ ಭಕ್ತರು ಎರಡೂವರೆ ಕೋಟಿಯಷ್ಟು ಕಾಣಿಕೆ ಅರ್ಪಿಸಿದ್ದಾರೆ. ಇಂದು ನಡೆದ ಹುಂಡಿ ಹಣ ಎಣಿಕೆಯಲ್ಲಿ 2.518 ಕೆಜಿ ಬಂಗಾರ, 2.916 ಕೆಜಿ ಬೆಳ್ಳಿ ಬಂದಿದೆ. ಕಾಣಿಕೆ ಹಣವೂ ಸೇರಿದಂತೆ ಎರಡೂವರೆ ಕೋಟಿ ಕಾಣಿಕೆ ಸಂಗ್ರಹವಾಗಿದೆ. ರಾಜ ಗಣೇಶನ ಆರಾಧನೆ 10 ದಿನಗಳು ನಡೆಯಲಿದೆ.