ಭರ್ಜರಿ ಮಳೆಗೆ ಕೋಡಿ ಬಿದ್ದ ಕೆರೆಗಳು... ಅಪಾರ ಪ್ರಮಾಣದ ಬೆಳೆ ನಾಶ - House flooded
ತುಮಕೂರು ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು, ಒಂದೇ ರಾತ್ರಿ ಸುರಿದ ಮಳೆಗೆ ಕೊರಟಗೆರೆಯ ಮಾವತ್ತೂರು, ತುಂಬಾಡಿ, ಮಧುಗಿರಿಯ ಚಂದ್ರಗಿರಿ, ಬಸವನಹಳ್ಳಿ, ಪಾವಗಡದ ಕನ್ನಮೇಡಿ, ಬ್ಯಾಡನೂರು ಕೆರೆಗಳು ಸೇರಿ 20ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ. ಕೋಡಿಬಿದ್ದ ಕಾರಣ ಹಲವು ಕಡೆಗಳಲ್ಲಿ ತೋಟಕ್ಕೆ ನೀರು ನುಗ್ಗಿ ತೆಂಗು ಹಾಗೂ ಬಾಳೆ ಗಿಡಗಳು ಧರೆಗುರಳಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೆಲ ಮನೆಗಳು ಜಲಾವೃತಗೊಂಡರೆ, ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ.
Last Updated : Aug 30, 2022, 6:50 PM IST