ದಟ್ಟಾರಣ್ಯದಲ್ಲಿ ಕೊಡಗಿನ ಮೂಲ ಮಲೆ ಕುಡಿಯರ ಸಾಂಸ್ಕೃತಿಕ ಹಬ್ಬದ ಸಂಭ್ರಮ! - ಮಲೆ ಕುಡಿಯ ಜನಾಂಗದ ಕಾಡು ಹಬ್ಬದ ಸ್ಪೇಷಲ್
ಕೊಡಗು ಅಂದ್ರೆ ವಿಭಿನ್ನವಾದ ಸಂಸ್ಕೃತಿಗಳ ತವರು. ಕೊಡಗಿನ ಸಂಸ್ಕೃತಿಯ ಮೂಲ ಬೇರು ಮಲೆ ಕುಡಿಯ ಆದಿವಾಸಿಗಳು. ದಟ್ಟ ಅರಣ್ಯ ಬಿಟ್ಟರೂ ಈ ಜನರು ತಮ್ಮ ಮೂಲ ಸಂಸ್ಕೃತಿಯನ್ನು ಮಾತ್ರ ಮರೆತಿಲ್ಲ. ಏಕೆಂದರೆ ಹತ್ತಾರು ಕಿಲೋ ಮೀಟರ್ ಬೆಟ್ಟ, ಗುಡ್ಡ ಹತ್ತಿ ಇಳಿದು ನಾಗರಿಕ ಸಮಾಜದಿಂದಲೇ ದೂರು ಉಳಿದು, ತಮ್ಮ ಕಾಡು ಹಬ್ಬವನ್ನು ಮೂಲ ಸ್ಥಳದಲ್ಲಿ ಎಲ್ಲರೂ ಸೇರಿ ಆಚರಿಸಿ ಎಂಜಾಯ್ ಮಾಡ್ತಾರೆ.