ಕರ್ನಾಟಕ

karnataka

ETV Bharat / videos

'ಹಾಗಾದರೆ ನಾನು ಹೊರಗೆ ಕುಳಿತುಕೊಳ್ಳಬೇಕೇ?' ಕೊಹ್ಲಿ​ ಬಗ್ಗೆ ಕೇಳಿದ ಪ್ರಶ್ನೆಗೆ ಕೆ.ಎಲ್.ರಾಹುಲ್ ಉತ್ತರ

By

Published : Sep 9, 2022, 9:37 AM IST

ಅಫ್ಘಾನಿಸ್ತಾನ ವಿರುದ್ಧ ಗುರುವಾರ ರಾತ್ರಿ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಟೀಂ ಇಂಡಿಯಾ ಉಪನಾಯಕ ಕೆ.ಎಲ್.ರಾಹುಲ್ ಅವರಿಗೆ ಮಾಧ್ಯಮ ಸಿಬ್ಬಂದಿ, ವಿರಾಟ್​​ ಕೊಹ್ಲಿ ಅವರನ್ನು ಟಿ20ಯಲ್ಲಿ ಆರಂಭಿಕರಾಗಿ ಕಣಕ್ಕಿಳಿಸುವ ಇರಾದೆ ಇದೆಯೇ? ಎಂದು ಕೇಳಿದರು. ಇದಕ್ಕೆ ನಗುಮೊಗದಿಂದಲೇ ಪ್ರತಿಕ್ರಿಯಿಸಿದ ಅವರು​​, "ಹಾಗಾದರೆ ನಾನು ಹೊರಗೆ ಕುಳಿತುಕೊಳ್ಳಬೇಕೇ"? ಎಂದರು. ತಂಡದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ​​ ಇದೆ. ವಿರಾಟ್​​ ಕೊಹ್ಲಿ ಓರ್ವ ಅತ್ಯದ್ಭುತ ಬ್ಯಾಟರ್​. ನಂಬರ್​ ಒಂದರ ಕ್ರಮಾಂಕ ಅಥವಾ ನಂಬರ್​ ಮೂರರ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ರೂ ಕೂಡ ಅವರ ಬ್ಯಾಟ್​​ನಿಂದ ರನ್​ ಹರಿದು ಬರುತ್ತದೆ ಎಂದರು.

ABOUT THE AUTHOR

...view details