ಶಿರಸಿಯಲ್ಲಿ ಆಹಾರ ತಿನ್ನಲಾಗದೇ ನಿತ್ರಾಣಗೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ - etv bharat kannada
ಶಿರಸಿ(ಊತ್ತರ ಕನ್ನಡ): ಬಾಯಲ್ಲಿ ವಸ್ತುವೊಂದು ಸಿಲುಕಿ 8 ದಿನಗಳಿಂದ ಆಹಾರ ಇಲ್ಲದೇ ನಿತ್ರಾಣಗೊಂಡಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ತಾಲೂಕಿನ ಮುರೇಗಾರ ಗ್ರಾಮದ ಮಾದಕಲೋಣೆಯ ಗಣೇಶ ಹೆಗಡೆ ಎಂಬುವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಸರ್ಪವನ್ನು ರಕ್ಷಿಸಲಾಗಿದೆ. ಜಮೀನಿನಲ್ಲಿ ಕೆಲಸಕ್ಕೆ ಹೋದ ಕೂಲಿಕಾರರು ಕಾಲುವೆಯ ಮಧ್ಯದಲ್ಲಿ ಬಿದ್ದುಕೊಂಡಿದ್ದ ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಉರಗ ತಜ್ಞ ಪ್ರಶಾಂತ ಹುಲೇಕಲ್ ಸ್ಥಳಕ್ಕೆ ಆಗಮಿಸಿ ಹಾವಿನ ರಕ್ಷಣೆ ಮಾಡಿದ್ದಾರೆ. 'ಬಾಯಲ್ಲಿ ಏನೋ ಸಿಲುಕಿದ್ದ ಕಾರಣ ಆಹಾರ ತಿನ್ನಲು ಆಗುತ್ತಿರಲಿಲ್ಲ. ಈಗ ಅದನ್ನು ತೆಗೆಯಲಾಗಿದೆ. ಸಮೀಪದ ಕಾಡಿಗೆ ಬಿಡುತ್ತೇವೆ' ಎಂದು ಅವರು ತಿಳಿಸಿದ್ದಾರೆ.