ವಿಡಿಯೋ: ಹಿಮಾಚಲ ವಿಧಾನಸಭೆ ಕಟ್ಟಡದ ಗೇಟ್, ತಡೆಗೋಡೆಯಲ್ಲಿ ಖಲಿಸ್ತಾನ್ ಧ್ವಜ - ಹಿಮಾಚಲ ಪ್ರದೇಶ ವಿಧಾನಸಭೆ ಕಟ್ಟಡ
ಧರ್ಮಶಾಲಾ(ಹಿಮಾಚಲ ಪ್ರದೇಶ): ರಾಜಧಾನಿ ಧರ್ಮಶಾಲಾದಲ್ಲಿರುವ ವಿಧಾನಸಭೆ ಕಟ್ಟಡದ ಮುಖ್ಯ ದ್ವಾರ ಮತ್ತು ಕಾಂಪೌಂಡ್ ತಡೆಗೋಡೆಗೆ ಖಲಿಸ್ತಾನಿ ಧ್ವಜ ಕಟ್ಟಿರುವುದು ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಎಸ್ಪಿ ಪ್ರತಿಕ್ರಿಯಿಸಿ, 'ಇದು ತಡರಾತ್ರಿ ಇಲ್ಲವೇ ಬೆಳಗ್ಗೆ ನಡೆದಿರುವ ವಿದ್ಯಮಾನ. ವಿಧಾನಸೌಧ ಗೇಟ್‌ನಿಂದ ನಾವು ಖಲಿಸ್ತಾನಿ ಧ್ವಜ ತೆರವು ಮಾಡಿದ್ದೇವೆ. ಪಂಜಾಬ್‌ನಿಂದ ರಾಜ್ಯಕ್ಕೆ ಆಗಮಿಸಿದ ಕೆಲವು ಪ್ರವಾಸಿಗರು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ' ಎಂದರು.