ಮಂಗಳೂರು: ಚಾರ್ ಕೋಲ್ - ಮರಳಿನಿಂದ ಮೂಡಿ ಬಂತು 'ಕೆಜಿಎಫ್ ಚಾಪ್ಟರ್ -2' ಪೋಸ್ಟರ್
'ಕೆಜಿಎಫ್ ಚಾಪ್ಟರ್ - 2' ಸಿನಿಮಾ ಬಿಡುಗಡೆಯಾಗಿ ವೀಕ್ಷಿಸುತ್ತಿರುವ ಅಭಿಮಾನಿಗಲ ನಡುವೆ ಮೂಡುಬಿದಿರೆಯ ಯುವ ಕಲಾವಿದ ತಿಲಕ್ ಕುಲಾಲ್ ಸಿನಿಮಾ ಪ್ರೊಮೋಷನ್ ಮಾಡಲು ಚಾರ್ಕೋಲ್ ಹಾಗೂ ಮರಳಿನಿಂದಲೇ 1000 ಸ್ಕ್ವೇರ್ ಫೀಟ್ನಲ್ಲಿ 2.30 ಗಂಟೆಯಲ್ಲಿ 'ಕೆಜಿಎಫ್ ಚಾಪ್ಟರ್ -2' ಪೋಸ್ಟರ್ ಅನ್ನು ಬಿಡಿಸಿದ್ದಾರೆ. ಈ ಪೋಸ್ಟರ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಶೇಷ ಪೋಸ್ಟರ್ಗೆ 80ಕೆಜಿ ಚಾರ್ಕೋಲ್ ಹಾಗೂ 90 ಕೆಜಿ ಮರಳು ಬಳಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಚಾರ್ಕೋಲ್ ಹಾಗೂ ಮರಳಿನಿಂದ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಪೋಸ್ಟರ್ ರಚನೆಯಾಗಿದೆ. ತಿಲಕ್ಗೆ ಸ್ನೇಹಿತರಾದ ಅಕ್ಷಿತ್ ಹಾಗೂ ರೋಹಿತ್ ಸಹಕಾರ ನೀಡಿದ್ದಾರೆ.