ಕರ್ನಾಟಕ

karnataka

ETV Bharat / videos

ಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾತಕಿ ಅರೆಸ್ಟ್​​: ವಿಡಿಯೋ - ಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾತಕಿ ಅರೆಸ್ಟ್

By

Published : Jun 20, 2022, 11:23 AM IST

ಅಲಪ್ಪುಳ (ಕೇರಳ):ಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾತಕಿಯನ್ನು ಪೊಲೀಸರು ಬಂಧಿಸಿದ್ದಾರೆ. ನೂರನಾಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿ.ಆರ್ ಅರುಣ್ ಕುಮಾರ್(37) ಸಂಜೆ ಗಸ್ತು ಕರ್ತವ್ಯಕ್ಕೆ ಜೀಪಿನಲ್ಲಿ ಬರುತ್ತಿದ್ದಾಗ ವಾಂಟೆಡ್ ಕ್ರಿಮಿನಲ್​​​ನನ್ನು ಗುರುತಿಸಿ ವಾಹನ ನಿಲ್ಲಿಸಿದ್ದಾರೆ. ಈ ವೇಳೆ, ಪಾತಕಿ ತಕ್ಷಣ ತನ್ನ ಬೈಕ್​​ನಿಂದ ಮಚ್ಚು ತೆಗೆದು ಎಸ್‌ಐ ಮೇಲೆ ದಾಳಿ ಮಾಡುತ್ತಾನೆ. ಆದರೂ ಪಾತಕಿಯನ್ನು ಬಿಡದ ಎಸ್​​ಐ ಆತನನ್ನು ಸದೆ ಬಡಿದು ಮಚ್ಚನ್ನು ಕಿತ್ತುಕೊಂಡಿದ್ದಾರೆ. ಬಳಿಕ ಪೊಲೀಸ್ ತಂಡದ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಎಲ್ಲುಂವಿಲಯಿಲ್ ಸುಗತನ್ ಬಂಧಿತ ವ್ಯಕ್ತಿ. ಘಟನೆಯಲ್ಲಿ ಗಾಯಗೊಂಡಿದ್ದ ಅರುಣ್ ಕುಮಾರ್​​ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಡಿಯೋವನ್ನು ಕೇರಳ ಪೊಲೀಸರು ತಮ್ಮ ಫೇಸ್ ಬುಕ್ ಪೇಜ್​​​ನಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details