ಕರ್ನಾಟಕ

karnataka

ETV Bharat / videos

ವಿಶ್ವ ಹೃದಯ ದಿನದ ನಿಮಿತ್ತ ಕಾವೇರಿ ಬೀಟ್ ವಾಕಥಾನ್ - ಹೃದಯ ದಿನಾಚರಣೆ

By

Published : Sep 26, 2022, 8:08 PM IST

ವಿಶ್ವ ಹೃದಯ ದಿನದ ನಿಮಿತ್ತ ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ಕಾವೇರಿ ಆಸ್ಪತ್ರೆಯಿಂದ ವಾಕಥಾನ್-2022ನ್ನು ಮುಂಜಾನೆ ಏರ್ಪಡಿಸಲಾಗಿತ್ತು. ಎಲೆಕ್ಟ್ರಾನಿಕ್ಸಿಟಿಯ ವಿಪ್ರೋ ಗೇಟ್-9ರಲ್ಲಿ ಆಯೋಜಿಸಿದ್ದ ಸೈಕ್ಲಿಂಗ್, ನಡಿಗೆ, ಓಟ, ನೃತ್ಯ ಮುಂತಾದ ಕಾರ್ಯಕ್ರಮವೇ ಎಲೆಕ್ಟ್ರಾನಿಕ್ಸಿಟಿ ಒಳಗಡೆ ಹೊಸ ಹುರುಪು ತಂದುಕೊಟ್ಟಿತ್ತು. ಕೆಂಪು ಹೃದಯದ ಬೆಲೂನ್ ಹಿಡಿದು ಬಿಳಿ ಟಿ ಶರ್ಟ್ ಧರಿಸಿ ಹೃದಯದ ಆರೋಗ್ಯಕ್ಕಾಗಿ ಓಟ, ನಡಿಗೆ ಸಂಗೀತವನ್ನು ವಯಸ್ಸಿನ ಅಂತರವಿಲ್ಲದೇ ಮಹಿಳೆಯರು ಯುವತಿ- ಯುವಕರು ಭಾಗವಹಿಸಿ ಸಂಭ್ರಮಿಸಿದರು. ಸಂಗೀತದ ನಾದಕ್ಕೆ‌ ಹೆಜ್ಜೆ ಹಾಕಿ ಹೃದಯ ದಿನಾಚರಣೆಯನ್ನು ಇನ್ನಷ್ಟು ಸೊಗಸಾಗಿಸಿದರು.

ABOUT THE AUTHOR

...view details