ಕರ್ನಾಟಕ

karnataka

ETV Bharat / videos

'ನನ್ನ ಮಗ ಶಿಕಾರಿಪುರದಿಂದ ಸ್ಪರ್ಧಿಸುತ್ತಾನೆಂದು ಹೇಳಿದ್ದೆ, ಅಂತಿಮ ನಿರ್ಧಾರ ಮೋದಿ, ಅಮಿತ್ ಶಾ ತೆಗೆದುಕೊಳ್ತಾರೆ' - ಶಿಕಾರಿಪುರ ಕ್ಷೇತ್ರದ ಸ್ಪರ್ಧೆ

By

Published : Jul 23, 2022, 4:11 PM IST

ಬೆಂಗಳೂರು: 'ನನ್ನ ಮಗ ಶಿಕಾರಿಪುರದಿಂದ ಸ್ಪರ್ಧಿಸುತ್ತಾನೆಂದು ನಿನ್ನೆ ಹೇಳಿದ್ದೇನೆ. ಆದರೆ, ಅಂತಿಮ ನಿರ್ಧಾರವನ್ನ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜೆಪಿ ನಡ್ಡಾ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನವೇ ಅಂತಿಮವಾಗಿರುತ್ತದೆ. ನಾನು ಯಾವುದೇ ಬೇಡಿಕೆಯಿಡಲು ಸಾಧ್ಯವಿಲ್ಲ. ಸಲಹೆ ಮಾತ್ರ ನೀಡಬಲ್ಲೆ. ರಾಜ್ಯದಲ್ಲಿ ಮುಂದಿನ ಅವಧಿಗೆ ನಾವೇ ಸರ್ಕಾರ ರಚನೆ ಮಾಡುತ್ತೇವೆ' ಎಂದು ಬಿಎಸ್​​ವೈ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾಳೆಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ. ರಾಜ್ಯದ 140 ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮ ಗುರಿ. ವಿಪಕ್ಷದ ಇಬ್ಬರು ಮುಖಂಡರು ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ಕಚ್ಚಾಡುತ್ತಿದ್ದಾರೆ. ಆದರೆ, ನಮ್ಮಲ್ಲಿ ಈ ರೀತಿಯ ಯಾವುದೇ ಪೈಪೋಟಿ ಇಲ್ಲ. ನಮ್ಮ ಪಕ್ಷ ಒಟ್ಟಿಗೆ ಚುನಾವಣೆ ಎದುರಿಸಲಿದ್ದು, ಸರ್ಕಾರ ರಚನೆ ಮಾಡಲಿದ್ದೇವೆ ಎಂದರು. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ತಮ್ಮನ್ನ ಕಡೆಗಣಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಪಕ್ಷದಲ್ಲಿ ನನ್ನನ್ನು ಕಡೆಗಣಿಸುವ ಮಾತಿಲ್ಲ. ಎಲ್ಲ ರೀತಿಯ ಸೌಲಭ್ಯ, ಸೌಲತ್ತು ಹಾಗೂ ಜವಾಬ್ದಾರಿ ನನಗೆ ನೀಡಲಾಗಿದೆ ಎಂದರು.

ABOUT THE AUTHOR

...view details