Kargil Vijay Diwas.. ಧಾರವಾಡದಲ್ಲಿ ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಿ ವಿಜಯೋತ್ಸವ - ಈಟಿವಿ ಭಾರತ್ ಕನ್ನಡ
ಧಾರವಾಡ: ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಯೋಗದಲ್ಲಿ ಕಾರ್ಗಿಲ್ ಯುದ್ಧದ 23ನೇ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪಕ್ಕೆ ಡಿಸಿ ಗುರುದತ್ತ ಹೆಗಡೆ ಹಾಗೂ ಸೈನಿಕ ಅಧಿಕಾರಿಗಳು ಪುಷ್ಪ ನಮನದೊಂದಿಗೆ ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಡಾ.ಯು.ಎಸ್.ದಿನೇಶ ಹಾಗೂ ಸುಬೇದಾರ ಗಿರಿಧರ್ ಸಿಂಗ್ ಕರ್ನಾಟಕ 24 ಎನ್.ಸಿ.ಸಿ. ಬಟಾಲಿಯನ್, ಕರ್ನಾಟಕ 5 ಎನ್.ಸಿ.ಸಿ.ಗರ್ಲ್ಸ್ ಬಟಾಲಿಯನ್ ಭಾಗಿಯಾಗಿದ್ದರು.