ಕರ್ನಾಟಕ

karnataka

ETV Bharat / videos

ಭಾರತ ಜೋಡೋ ಫ್ಲೆಕ್ಸ್​ನಲ್ಲಿ ಕನ್ನಡ ಬಳಸಿ: ಫ್ಲೆಕ್ಸ್​ಗೆ ಮಸಿ ಬಳಿದು ಆಕ್ರೋಶ - ಈಟಿವಿ ಭಾರತ ಕನ್ನಡ

By

Published : Sep 30, 2022, 6:19 PM IST

ಮೈಸೂರು: ಭಾರತ್ ಜೋಡೋ ಯಾತ್ರೆಯ ಫ್ಲೆಕ್ಸ್​ನಲ್ಲಿ ಕನ್ನಡ ಮಾಯವಾಗಿದೆ ಎಂದು ಕರವೇ ಬ್ಯಾನರ್​​ಗೆ ಮಸಿ ಬಳಿದು, ಕನ್ನಡ ಬಳಸಿ ಎಂದು ಬರೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದೆ. ಇಂದಿನಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟಿದೆ. ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಲಿರುವ ಯಾತ್ರೆಗೆ ಸ್ವಾಗತಿಸಲು ನಂಜನಗೂಡು ಊಟಿ ರಸ್ತೆಯ ಎರಡೂ ಬದಿಗಳಲ್ಲಿ ಫ್ಲೆಕ್ಸ್ ಅಳವಡಿಸಲಾಗಿದ್ದು, ಈ ಫ್ಲೆಕ್ಸ್​ನಲ್ಲಿ ಕನ್ನಡ ಭಾಷೆ ಬಿಟ್ಟು, ಹಿಂದಿ ಮತ್ತು ಇಂಗ್ಲಿಷ್​​​ ಬಳಸಲಾಗಿದೆ. ಇದನ್ನು ಪ್ರತಿಭಟಿಸಿ ನಂಜನಗೂಡಿನ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ ನೇತೃತ್ವದಲ್ಲಿ ಫ್ಲೆಕ್ಸ್​ಗಳಿಗೆ ಮಸಿಯಲ್ಲಿ ಕನ್ನಡ ಬಳಸಿ ಎಂದು ಬರೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details