ಗಣೇಶ ಮೂರ್ತಿ ನಿಮಜ್ಜನ ಮರವಣಿಗೆ: ಭರ್ಜರಿ ಸ್ಟೆಪ್ ಹಾಕಿದ ಸಂಗಣ್ಣ ಕರಡಿ - ಈಟಿವಿ ಭಾರತ್ ಕನ್ನಡ
ಕೊಪ್ಪಳ: ಹಿಂದೂ ಮಹಾಸಭಾ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಡಿಜೆ ಸದ್ದಿಗೆ ಕುಣಿದರು. ನಗರದ ಈಶ್ವರ ಪಾರ್ಕ್‌ನಲ್ಲಿ ನಡೆ ಗಣೇಶೋತ್ಸವದ ಹನ್ನೊಂದನೇ ದಿನವಾದ ಶನಿವಾರ ನಿಮಜ್ಜನ ಕಾರ್ಯ ಜರುಗಿತು. ಮೆರವಣಿಯಲ್ಲಿ 'ಮುಂದಿನ ಶಾಸಕ ಸಂಗಣ್ಣ..' ಎಂಬ ಘೋಷಣೆ ಕೇಳಿಬಂತು. ಇದು ಸಂಸದ ಸಂಗಣ್ಣ ಕರಡಿ ಮುಂಬರುವ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸುವ ವದಂತಿಗೆ ಇಂಬುಕೊಟ್ಟಂತಿತ್ತು. ಜೊತೆಗೆ, ಅಭಿಮಾನಿಗಳು ಪ್ರಧಾನಿ ಮೋದಿಗೂ ಜೈಕಾರ ಹಾಕಿದರು.