3 ಮಂದಿ ಸ್ಪರ್ಶಿಸುವ ಮುಖೇನ ಕಾಪುವಿನ ಪಿಲಿಕೋಲ ಸಂಪನ್ನ - ಕಾಪು ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ
ಕಾಪು(ಉಡುಪಿ): ಐತಿಹಾಸಿಕ ಪ್ರಸಿದ್ಧ ದ್ವೈವಾರ್ಷಿಕವಾಗಿ ನಡೆಯುವ ಕಾಪು ಪಿಲಿಕೋಲ ಮೂರು ಮಂದಿಯನ್ನು ಸ್ಪರ್ಶಿಸುವ ಮುಖೇನ ಸಂಪನ್ನಗೊಂಡಿದೆ. ಕಾಪು ಶ್ರೀಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಮೇ 10 ರಂದು ಆರಂಭವಾದ ನೇಮೋತ್ಸವಕ್ಕೆ ಮೇ 14 ರಂದು ಶನಿವಾರ ಹುಲಿಚಂಡಿ (ಪಿಲಿಕೋಲ) ನೇಮೋತ್ಸವದ ಮೂಲಕ ತೆರೆ ಬಿತ್ತು. ಹುಲಿಚಂಡಿ ಕೋಲಕ್ಕೆ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.