ಗುರುದ್ವಾರದ ಮೇಲಿನ ಉಗ್ರ ದಾಳಿಯಲ್ಲಿ ಗುರುಗ್ರಂಥ ಸಾಹಿಬ್ ರಕ್ಷಣೆ - ಗುರುಗ್ರಂಥ ಸಾಹಿಬ್ ರಕ್ಷಣೆ
ಕಾಬೂಲ್‌ನ ಗುರುದ್ವಾರದ ಮೇಲೆ ಉಗ್ರರು ದಾಳಿ ಮಾಡಿದ್ದು, ಪೂಜಾ ಸ್ಥಳದಲ್ಲಿದ್ದ ಗುರುಗ್ರಂಥ ಸಾಹಿಬ್ ಅನ್ನು ರಕ್ಷಿಸಿ ತರಲಾಗಿದೆ. ಗುರುದ್ವಾರ ಕರ್ತಾ ಪರ್ವ್ ಅಧ್ಯಕ್ಷ ಗುರ್ನಾಮ್ ಸಿಂಗ್ ಅವರು ಗುರುಗ್ರಂಥ ಸಾಹಿಬ್ ಅನ್ನು ತಲೆ ಮೇಲೆ ಹೊತ್ತು ತಂದಿದ್ದಾರೆ. ಉಗ್ರರ ದಾಳಿಯ ವೇಳೆ ಗುರುದ್ವಾರದಲ್ಲಿ 10 ಜನರು ಇದ್ದರು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.