ಮೊದಲು ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ತನ್ನಿ, ನಂತರ ಯಾರು ಮುಖ್ಯಮಂತ್ರಿ ಅಂತಾ ಯೋಚನೆ ಮಾಡಿ: ಕೆ. ಎಸ್ ಈಶ್ವರಪ್ಪ - ಡಿಕೆಶಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಸ್ಫರ್ಧೆ ಬಗ್ಗೆ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ
ಮೊದಲು ನಿಮ್ಮ ಪಾರ್ಟಿ ಅಧಿಕಾರಕ್ಕೆ ತನ್ನಿ. ನಂತರ ಯಾರು ಮುಖ್ಯಮಂತ್ರಿ ಅಂತ ಯೋಚನೆ ಮಾಡಿ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಟಾಂಗ್ ನೀಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ- ಸಿದ್ದರಾಮಯ್ಯ ಯಾರು ಮುಖ್ಯಮಂತ್ರಿ ಆಗ್ಬೇಕು ಎನ್ನುವ ರೇಸ್ ನಲ್ಲಿದ್ದಾರೆ. ಮೊದಲು ನಿಮ್ಮ ಪಕ್ಷವನ್ನು ಜನ ಮೆಚ್ಚಲಿ. ಅದಾದ ನಂತರ ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಆ ಮೇಲೆ ಯಾರು ಮುಖ್ಯಮಂತ್ರಿ ಅಂತ ಯೋಚನೆ ಮಾಡಿ ಎಂದರು.