ಜೈಲಿಂದ ಹೊರಬಂದ ಶಾಸಕ ಜಿಗ್ನೇಶ್ 'ಪುಷ್ಪ' ಸಿನಿಮಾ ಸ್ಟೈಲಲ್ಲಿ ರಿಯಾಕ್ಷನ್! - ಜಿಗ್ನೇಶ್ ಮೇವಾನಿ ಪುಷ್ಟ ಸ್ಟೈಲ್
ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಇಂದು ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಜೈಲಿನಿಂದ ಹೊರಬಂದಿರುವ ಅವರು ಪುಷ್ಪ ಚಿತ್ರದ ಸಿಗ್ನೇಚರ್ ಸ್ಟೈಲ್ ಮಾಡಿ, ಗಮನ ಸೆಳೆದಿದ್ದಾರೆ. ಅಸ್ಸೋಂನ ಕೋರ್ಟ್ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು ಮಾಡಿದೆ. ಈ ವೇಳೆ ಮಾತನಾಡಿರುವ ಅವರು, ಪ್ರಕರಣವೊಂದರಲ್ಲಿ ನನ್ನನ್ನು ಜೈಲಿಗಟ್ಟುವ ಹೇಡಿತನದ ಕೆಲಸವನ್ನು ಬಿಜೆಪಿ ಮಾಡಿದೆ. ನಾನು ಯಾರಿಗೂ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.